Saturday, December 24, 2011

We need a revolution in the education system in India?

Education builds the man so it builds the nation. Today we claim to be the biggest human resources supplier for the world, but are we concerned what quality of human capital we are building and for whose needs? We supply bureaucrats to the government, software engineers to the IT companies around the world, highly paid managers to the multinationals, we supply engineers and science graduates as researchers to the foreign universities. What capital are we building for ourselves?

India aspires to be powerful, it wants to play a role in the international community, for that to happen, its economy has to grow multifold and for that to happen, it requires a huge force of entrepreneurs who could transform it into a nation which produces, from the one which only consumes. India needs a huge force of innovators who could make it self reliant in all kinds of sciences and technologies. India needs artists who could make its culture the most popular in the world. A culture which is not only saleable itself but also helps in selling India’s products across the world. In a nutshell, India needs Henry Fords, Bill Gateses, Thomas Alva Edisons and Michael Jacksons born and educated in India.

One may say we had few. Yes, we had. M. S. Swaminathan who made India self reliant in food grains, Dhiru Bhai Ambani who proved a common man can become a billionaire, Dr. Varghese Kurien who is the father of Amul milk movement, Dr. A. P. J. Abdul Kalam who dared to build missiles for India, Pundit Ravishankar who is the ambassador of the Indian music to the world. Such people though in small numbers, were always there. But they are not the products of this education system. This system did not teach them how to become innovators or entrepreneurs or artists. Had it done so, they would have been millions in numbers. These people were inspired themselves. To some of them, their education may have given the technical know-how (though it is hardly conceivable), but not the dream or the inspiration needed. It is the education which should inspire one to become something one really wants to. Education should make you free, should make you experiment and it should make you ask questions. Ultimately, it should make you realize what you are.

Youngsters in India, do not have the freedom of selecting there career, it is said. They are forced to become engineers, doctors, MBA’s and IAS officers, it is said. Yes, agree. But that is not the problem. The problem is, youngsters in India do not have the vision to think beyond. Neither their parents, nor their grandparents had that vision. This is where the root of the problem is. Generations have gone through a system which sucks. Now the beauty is even the law-makers and educators of today’s India are products of that age old system. That is why no less than a revolution is needed in the education system in India.

What do we expect from such a revolution?

A revolution means big changes. We expect the revolution in education to bring lots of changes. These changes will result into:

1. Best talents of the country working in the education sector.


Today, education is not the career of choice, but it is the career of compromise. If you are a teacher, people sympathize, they curse the prevalent unemployment in the country. Education is one of the highest profit making ‘industries’ in the service sector, but its workers are the least paid compared to those working in somewhat glamorous sectors like the IT industry. This has to change.

2. A world class infrastructure.

The experience of shopping at malls is better than the old dirty bazaars. The experience of traveling in a metro train is much better than suffering in the city buses. The experience of driving on four or six lane highways is much better the same way. The same way, infrastructure has a meaning in education. World class universities and schools with world class libraries, laboratories and classrooms, in a world class building make a world class infrastructure for education.

3. Greater investments into education, public as well as private.

We need world class infrastructure and best talents in all schools and universities of India. These resources should not remain limited to a handful of IIT’s or IIM’s. Each village should have a school with all resources and facilities. Each university should have whatever it needs for a better education. This would require huge money and hence, huge investments.

4. Education which encourages innovation and creativity.

When farmers in the villages of Punjab make a vehicle from the diesel engine and name it Maruta (A male version of Maruti), that is innovation. When villagers of the Rajasthan and Gujarat transform the Bike ‘Enfield Bullet’ into a local auto-rickshaw, that is creativity. How many automobile engineering students could do likewise? The question is, how many?

5. Education which encourages entrepreneurship.

In a Hindi movie ‘Nayak’, the father of the actress refuses to permit for her marriage with the actor because he is not a government servant. At last, he permits, but then the Actor had become the chief minister of the state. This mindset of the society, particularly of the middle class, has to be changed. You are not a respectful person if after education you start a business, as that is seen as a failure in getting a job. It is the task of the education system to change this mindset. It also has to inspire the youth for the necessary courage and vision for entrepreneurship.

6. An education which makes a child sad when the last bell is rung at the end of the day in the school.

Courtesy, http://hsonline.wordpress.com

Wednesday, December 21, 2011

CBSE syllabus in PUC in Karnataka from 2012-13

BANGALORE: CBSE syllabus would be introduced in science stream (physics, chemistry, maths, biology) in Pre-University Course (PUC) in Karnataka from the next academic year, Primary and Second Education Minister, Vishweshwara Hegde Kageri, said today.

First year PUC students (11th standard) would have CBSE syllabus from 2012-13 and continue with it next year (12th standard). Those who are in second PUC (12th standard) next year (2012-13) would, however, have state syllabus, he told reporters here.

"The aim is to see that the students are able to compete in all-India exams effectively," the Minister said.

Bridge course would be conducted after SSLC (10th standard) as students are bound to face some hardship and pressure while switching over to the CBSE syllabus, Kageri said, adding, teachers would also be trained in the process.

Fifth and 8th standard students would have new text books from the coming academic year (2012-13), while the remaining standards would have new books from 2013-14, he said.

Course materials on the lines of CBSE are being finalised by resource persons as per the National Curriculum Framework 2005, the Minister said, adding extensive consultations had been held with former education ministers, experts and NGOs on updating content in tune with present times.

Meanwhile, Vishweshwara Hegde Kageri said said the Government would open a security press at Peenya here in the next financial year.

Vishweshwara Hegde Kageri also said the two-day "Kadambotsava-2011", a mega cultural fest, would be held at the ancient city of Banavasi in Uttara Kannada district from December 24. On the occasion, the coveted "Pampa Prashasti" award would be presented to acclaimed Kannada literary figure Chandrashekar Patil (Champa) by Karnataka chief minister DV Sadananda Gowda.

Courtesy: Times Of India, 21 December 2011

Wednesday, November 30, 2011

ಪಿಯುಸಿಗೆ ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮ



ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮವನ್ನು ರಾಜ್ಯದ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸೋಮವಾರ ಇಲ್ಲಿ ಹೇಳಿದರು.

ವೈದ್ಯಕೀಯ ಶಿಕ್ಷಣದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಕ್ರಮಕ್ಕೂ ಈಗ ರಾಜ್ಯದಲ್ಲಿರುವ ಪಠ್ಯಕ್ರಮಕ್ಕೂ ಭಾರಿ ವ್ಯತ್ಯಾಸ ಇದೆ. ಆ ಹಿನ್ನೆಲೆಯಲ್ಲಿ ಕನಿಷ್ಠ ಎರಡು ವರ್ಷ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ಮುಂದೂಡಿ ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿರುವುದಾಗಿ ಅವರು ವಿವರಿಸಿದರು.

ಜಾನಪದ ವಿಶ್ವವಿದ್ಯಾಲಯದ ವೆಬ್‌ಸೈಟ್ ಮತ್ತು ಲಾಂಛನ ಬಿಡುಗಡೆ ಮಾಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಷ್ಟ್ರಮಟ್ಟದ ಏಕರೂಪ ಪ್ರವೇಶ ಪರೀಕ್ಷೆಗೆ ರಾಜ್ಯ ಒಪ್ಪಿದೆ. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡು ವರ್ಷಗಳ ಕಾಲಾವಕಾಶ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಒಪ್ಪದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅವರು ವಿವರಿಸಿದರು.

2012ರ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿ ಹಾಗೂ 2013ರಿಂದ ದ್ವಿತೀಯ ಪಿಯುಸಿಗೆ ರಾಷ್ಟ್ರೀಯ ವಿಜ್ಞಾನ ಪಠ್ಯಕ್ರಮ ಅಳವಡಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ನಡುವಿನ ಅಂತರ ಹೋಗಲಾಡಿಸದೇ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಒಪ್ಪಿಕೊಂಡರೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಹೇಳುವಂತೆ ಇದೇ ವರ್ಷದಿಂದ ಹೊಸ ವ್ಯವಸ್ಥೆ ಅಳವಡಿಸಿಕೊಂಡರೆ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಗೆ ಸಿಗುವ ಸಮಯ ಕೇವಲ 90 ದಿನ. ಈ ಸಮಯದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುವುದು ಕಷ್ಟವಾಗುತ್ತದೆ ಎಂದ ಅವರು, ರಾಷ್ಟ್ರೀಯ ಮಟ್ಟದ ಸಿಇಟಿಯಿಂದ ರಾಜ್ಯಕ್ಕೂ ಲಾಭ ಇದೆ. ಶೇ 15ರಷ್ಟು ವೈದ್ಯಸೀಟುಗಳು ರಾಷ್ಟ್ರ ಮಟ್ಟದಲ್ಲಿಯೂ ಲಭ್ಯವಾಗುತ್ತವೆ ಎಂದರು.

ಹೊಸ ಪಠ್ಯಕ್ರಮದಿಂದ ಎದುರಾಗುವ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧ ಇದೆ. ಪಿಯುಸಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರೌಢ ಶಿಕ್ಷಣದಿಂದಲೇ ಕೇಂದ್ರ ಪಠ್ಯಕ್ರಮ ಜಾರಿ ಕುರಿತು ಚಿಂತನೆ ನಡೆಸಲಾಗಿದೆ. ಪಿಯುಸಿ ಪಠ್ಯಕ್ರಮ ಬದಲಾದ ನಂತರ ಪ್ರೌಢಶಿಕ್ಷಣದ ಪಠ್ಯಕ್ರಮ ಬದಲಾವಣೆ ಕೂಡ ಅನಿವಾರ್ಯವಾಗಬಹುದು ಎಂದರು.



ಮೇ 6ರಂದು ಕಾಮೆಡ್-ಕೆ ಸಿಇಟಿ

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರುವ ಮೇ 6ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಾಗಿ `ಕಾಮೆಡ್-ಕೆ` ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಭಾರತೀಯ ವೈದ್ಯಕೀಯ ಮಂಡಳಿ ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ಎನ್‌ಇಇಟಿ) ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಕಾಮೆಡ್-ಕೆ, ಸಿಇಟಿ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ.

ಬರುವ ಮಾರ್ಚ್ ಹತ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಫೆಬ್ರುವರಿ 15ರಂದು ಪರೀಕ್ಷೆಯ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Monday, November 14, 2011

ಉನ್ನತ ಶಿಕ್ಷಣ: ವಿದೇಶಕ್ಕೆ ಹೋಗುವ ಮುನ್ನ...


ನೀವು ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವಿರಾದರೆ, ಈ ನಿರ್ಣಯದ ಹಿಂದಿರುವ ಪ್ರೇರಣೆ ಮತ್ತು ವೃತ್ತಿಜೀವನದ ಉದ್ದೇಶದ ಅರಿವಿರಬೇಕು.

ವಿದೇಶಿ ಶಿಕ್ಷಣದ ವ್ಯಾಮೋಹದ ಕಾಲವೊಂದಿತ್ತು. ಪ್ರಾಯಶಃ ವಸಾಹತುಶಾಹಿ ಆಳ್ವಿಕೆಗೂ, ವಿದೇಶಿ ವ್ಯಾಮೋಹಕ್ಕೂ ಆಳವಾದ, ನೇರವಾದ ಸಂಬಂಧವಿತ್ತೆನಿಸುತ್ತದೆ. ಈ ವ್ಯಾಮೋಹ ಶಿಕ್ಷಣಕ್ಕೆ ಸೀಮಿತವಾಗದೆ, ವಿದೇಶಿ ಸಂಸ್ಕೃತಿಗೂ, ಉತ್ಪನ್ನಗಳಿಗೂ ಅನ್ವಯವಾಗುತ್ತಿತ್ತು.

ಆದರೆ, ಪಾಶ್ಚಾತ್ಯ ದೇಶಗಳ ಪ್ರಾಬಲ್ಯ 20ನೇ ಶತಮಾನಕ್ಕೆ ಅಂತ್ಯಗೊಂಡು, ಈಗ ವಿದೇಶಕ್ಕೆ ಹೋಗುವ ಕಾರಣಗಳೇ ಬೇರೆ; ಅದು ಮೋಹದ ಸೆಳೆತವಂತೂ ಅಲ್ಲ.

ಜಾಗತೀಕರಣದ ನಂತರ, ಭಾರತದ ಅರ್ಥವ್ಯವಸ್ಥೆ ಜ್ಞಾನದ, ತಿಳಿವಳಿಕೆಯ ತಳಹದಿಯ ಮೇಲೆ ನಿಂತಿದ್ದು, ನಮ್ಮ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ಇಂದು ಭಾರತದಲ್ಲೇ ಅನೇಕ ವಿಶ್ವಮಾನ್ಯತೆ ಪಡೆದ ಕಾಲೇಜುಗಳು, ವಿಶ್ವವಿದ್ಯಾಲಯಗಳೂ ಇವೆ.

ಇದರ ಜೊತೆಗೆ, ಅನೇಕ ವಿದೇಶಿ ವಿಶ್ವವಿದ್ಯಾಲಯಗಳು ಇಲ್ಲೇ ಸ್ಥಾಪಿತವಾಗುತ್ತಿವೆ. ಹಾಗಾಗಿ, ಇಂದು ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಬಗ್ಗೆ ತರ್ಕಾಧಾರಿತ ಯೋಚನೆಯ ನಂತರವೇ ನಿರ್ಧರಿಸುತ್ತಾರೆ.

ವಿದೇಶಕ್ಕೆ ಏಕೆ?
ನೀವು ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವಿರಾದರೆ, ಈ ನಿರ್ಣಯದ ಹಿಂದಿರುವ ಪ್ರೇರಣೆ ಮತ್ತು ವೃತ್ತಿಜೀವನದ ಉದ್ದೇಶದ ಅರಿವಿರಬೇಕು. ವಿದೇಶಿ ಶಿಕ್ಷಣ, ಖರ್ಚುವೆಚ್ಚಕ್ಕೆ ವರ್ಷಕ್ಕೆ ಸರಾಸರಿ 10-15 ಲಕ್ಷ ರೂಪಾಯಿಗಳಾಗಬಹುದು.

ಆದ್ದರಿಂದ, ವಿದೇಶಿ ವ್ಯಾಸಂಗದ ನಂತರದ ವೃತ್ತಿಯಲ್ಲಿನ ಸಾಧನೆ ಇಲ್ಲಿಯೇ ಸಾಧ್ಯವೇ ಎಂದೊಮ್ಮೆ ಯೋಚಿಸಿ. ಸಾಮಾನ್ಯವಾಗಿ, ವಿದೇಶಿ ಶಿಕ್ಷಣದ ಹಿಂದಿರುವ ಬಲವಾದ ಕಾರಣಗಳೆಂದರೆ:

ನಿರ್ದಿಷ್ಟವಾದ ಕೋರ್ಸ್ ಅಥವಾ ತಜ್ಞತೆಯ ಅಗತ್ಯಗಳು

ಭಾರತದಲ್ಲಿನ ಅತ್ಯುನ್ನತ ವಿಶ್ವವಿದ್ಯಾಲಯಗಳ ಪ್ರವೇಶದ ತೊಡಕುಗಳು

ಜಗದ್ವಿಖ್ಯಾತ ವಿಶ್ವವಿದ್ಯಾಲಯಗಳಲ್ಲಿ (ಕೇಂಬ್ರಿಡ್ಜ್, ಹಾರ್ವರ್ಡ್ ಇತ್ಯಾದಿ) ಓದುವ ಬಯಕೆ

ವಿದೇಶಿ ವೃತ್ತಿಜೀವನ

ವೈಯಕ್ತಿಕ ಕಾರಣಗಳು

ನಿಮ್ಮ ಉದ್ದೇಶಗಳೇನೇ ಇರಲಿ, ಯಾವುದೇ ಪ್ರೇರಣೆಗಳಿರಲಿ, ನಿಮ್ಮ ಆಯ್ಕೆಯಲ್ಲಿ ವಿವೇಚನೆ ಇರಬೇಕು.

ಇಂದು ಜಾಗತಿಕ ಜಗತ್ತಿನಲ್ಲಿ ತೀವ್ರವಾಗಿ ಬದಲಾವಣೆಗಳಾಗುತ್ತಿದ್ದು ನೀವು ವ್ಯಾಸಂಗ ಮುಗಿಸುವ ಸಮಯಕ್ಕೆ, ಆಗಬಹುದಾದ ಬದಲಾವಣೆಗಳ ಕಲ್ಪನೆ ಮತ್ತು ದೂರದೃಷ್ಟಿ ಇರಬೇಕು. ಏಕೆಂದರೆ, ನಿಮ್ಮ ನಿರ್ಣಯ ಈ ರೀತಿ ತರ್ಕಬದ್ಧವಾಗಿದ್ದಲ್ಲಿ ಮಾತ್ರ, ವೃತ್ತಿ ಜೀವನದ ಯಶಸ್ಸು ಸಾಧ್ಯ.

ವಿದೇಶಿ ಪದವಿಯ ಮಹತ್ವ, ಪ್ರಖ್ಯಾತಿ

ನೀವು ಯಾವ ದೇಶದಲ್ಲಿ ಓದಿದ್ದೀರಿ ಎನ್ನುವುದಕ್ಕಿಂತ, ಯಾವ ವಿಶ್ವವಿದ್ಯಾಲಯದಲ್ಲಿ ಎನ್ನುವುದೇ ಮುಖ್ಯ. ಮುಂದುವರಿದ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯಿಂದ, ವಿಶ್ವವಿದ್ಯಾಲಯಗಳಿಗೆ ಆಯಾ ಸರ್ಕಾರಗಳಿಂದ ಸಿಗುತ್ತಿದ್ದ ಅನುದಾನ, ಸಹಾಯಧನಗಳಲ್ಲಿ ಗಣನೀಯ ಪ್ರಮಾಣದ ಕಡಿತಗಳಾಗಿವೆ.

ಇದರ ಪರಿಣಾಮವಾಗಿ, ಹೊರದೇಶದ ಹಲವಾರು ವಿಶ್ವವಿದ್ಯಾಲಯಗಳು ತಮ್ಮ ಏಜೆಂಟರುಗಳ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ, ಕಾನೂನುಬಾಹಿರವಾಗಿ ದಾಖಲು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ, ಅನೇಕ ವಿಶ್ವವಿದ್ಯಾಲಯಗಳು ಮುಚ್ಚುವ ಸ್ಥಿತಿಗೂ ಬಂದಿವೆ.

ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಿಸಿಕೊಂಡ ಭಾರತದ ಅನೇಕ ವಿದ್ಯಾರ್ಥಿಗಳು, ತೊಂದರೆಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಆದ್ದರಿಂದ, ನೀವು ವಿದೇಶಿ ಪದವಿಗಾಗಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡುವಾಗ, ಜಾಗ್ರತೆಯಿಂದಿರಬೇಕು.

ವಿವರಗಳನ್ನು ಪರಿಶೀಲಿಸಿ; ಎಚ್ಚರಿಕೆಯಿಂದ ಆರಿಸಿ

ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಮಾಡುವುದು ನಿಮ್ಮ ಜೀವನದ ಅತ್ಯಂತ ಪ್ರಮುಖ ನಿರ್ಧಾರ. ಈ ನಿರ್ಧಾರದ ಪೂರ್ವಭಾವಿಯಾಗಿ ನಿಮ್ಮ ಆಸಕ್ತಿ ಮತ್ತು ಅಭಿರುಚಿಯ ಅರಿವು ನಿಮಗಿರಬೇಕು.

ಹಾಗೆಯೇ ಉನ್ನತ ಶಿಕ್ಷಣ, ನಿಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ವೃದ್ಧಿಸಿ, ವ್ಯಕ್ತಿತ್ವವನ್ನು ವಿಕಸಿಸುವ ನಿಟ್ಟಿನಲ್ಲಿರಬೇಕು. ಆದರೆ, ವಿದೇಶಿ ಶಿಕ್ಷಣ ದುಬಾರಿಯಾದ್ದರಿಂದ, ಹಣಕಾಸಿನ ವ್ಯವಸ್ಥೆಯ ಬಗ್ಗೆ ಹಿರಿಯರೊಡನೆ ಸಮಾಲೋಚಿಸಿ.

ನೀವು, ಉನ್ನತ ಶಿಕ್ಷಣ ಮಾಡಬಯಸುವ ದೇಶದಲ್ಲಿ ಸರ್ಕಾರದ ಹತೋಟಿ ತಂತ್ರಗಳು, ಗುಣಮಟ್ಟ ಕಾಪಾಡುವ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ, ಇತ್ಯಾದಿಗಳಿದ್ದು, ಜ್ಞಾನಾರ್ಜನೆಗೆ ಆಂತರಿಕ ಗಲಭೆ, ವರ್ಣದ್ವೇಷಗಳಿಲ್ಲದ ಮುಕ್ತವಾದ, ಶೈಕ್ಷಣಿಕ ವಾತಾವರಣವಿರಬೇಕು.

ಉನ್ನತ ಶಿಕ್ಷಣ, ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗಿ, ಯಶಸ್ವಿ ವೃತ್ತಿಜೀವನಕ್ಕೆ ಪೂರಕವಾಗಿರಬೇಕು.

ವೃತ್ತಿಜೀವನದ ರೂಪುರೇಷೆಯ ಬಗ್ಗೆ, ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ, ಆಗಸ್ಟ್ 15, 2011ರಂದು,ಈ ಪತ್ರಿಕೆಯಲ್ಲಿ ಪ್ರಕಟಿತ `ಯಾವ ಕೋರ್ಸ್, ಯಾವ ಕಾಲೇಜ್?` ಲೇಖನವನ್ನು ಗಮನಿಸಿ.

ವಿದೇಶಿ ಶಿಕ್ಷಣಕ್ಕೆ ಅನೇಕ ಪೂರ್ವಸಿದ್ದತೆಗಳಿರುತ್ತವೆ; ಇವುಗಳನ್ನು ವ್ಯವಸ್ಥಿತವಾಗಿ ಯೋಜಿಸಬೇಕು. ಆಗಲೇ, ನಿಮ್ಮ ಪ್ರವೇಶಕ್ಕೂ, ಪ್ರಯಾಣಕ್ಕೂ ಅಡೆಚಣೆ ಇಲ್ಲದೆ, ಸಕಲವೂ ಸುಸೂತ್ರವಾಗಿ ಆಗಬಹುದು.

ಪ್ರವೇಶ ಪರೀಕ್ಷೆಗಳು:ನೀವು ನಿರ್ಧರಿಸಿದ ಕೋರ್ಸ್‌ಗೆ ನಿಗದಿತ ಪ್ರವೇಶ ಪರೀಕ್ಷೆಗಳಿರುತ್ತವೆ. ಉದಾಹರಣೆಗೆ, ಮ್ಯೋನೇಜ್‌ಮೆಂಟ್ ಶಿಕ್ಷಣಕ್ಕೆ ಜಿಮಾಟ್, ಕಾನೂನಿಗೆ ಎಲ್‌ಸಾಟ್, ವೈದ್ಯಕೀಯ ಶಿಕ್ಷಣಕ್ಕೆ ಎಮ್‌ಸಾಟ್, ಎಂಜಿನಿಯರಿಂಗ್‌ಗೆ ಜಿಆರ್‌ಇ, ಅಥವಾ ಸಾಟ್ . ಈ ರೀತಿ ನಿಮ್ಮ ಕೋರ್ಸ್ ಮತ್ತು ವಿಶ್ವವಿದ್ಯಾಲಯಕ್ಕೆ ಅನುಗುಣವಾಗಿ ಯಾವ ದೇಶದಲ್ಲಿ ಯಾವ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ವಿಚಾರಿಸಿ.

ಈ ಪರೀಕ್ಷೆಗಳಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ, ಒಳ್ಳೆಯ ಗ್ರೇಡಿನ ಅವಶ್ಯಕತೆ ಇರುತ್ತದೆ. ಈ ಪರೀಕ್ಷೆಗಳಿಗೆ, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳ ಮುಖಾಂತರ ತರಬೇತಿಯನ್ನೂ ಪಡೆದುಕೊಳ್ಳಬಹುದು.

ಇಂಗ್ಲಿಷ್ ಪರೀಕ್ಷೆ
ಉನ್ನತ ಶಿಕ್ಷಣಕ್ಕಾಗಿ ಜನಪ್ರಿಯ ರಾಷ್ಟ್ರಗಳೆಂದರೆ ಯೂರೋಪ್, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್.

ಪ್ರಪಂಚದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುವುದರಿಂದ, ವಿದ್ಯಾರ್ಥಿಗಳ ಇಂಗ್ಲಿಷ್ ಮಟ್ಟದ ಮಾಪನವನ್ನು ಐ.ಇ.ಎಲ್.ಟಿ.ಎಸ್ ಅಥವಾ ಟೊಫೆಲ್ ಪರೀಕ್ಷೆಗಳ ಸಹಾಯದಿಂದ ಮಾಡಲಾಗುತ್ತದೆ. ನೀವು ತೆಗೆದುಕೊಳ್ಳಬೇಕಾದ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಿ.

ವಿಶ್ವವಿದ್ಯಾಲಯಗಳ ಪಟ್ಟಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಬಯಸುವ ವಿಶ್ವವಿದ್ಯಾಲಯದಲ್ಲೇ ಪ್ರವೇಶ ಸಿಗುವುದರ ಬಗ್ಗೆ ಮುಂಚಿತವಾಗಿಯೇ ತಿಳಿಯುವುದು ಅಸಾಧ್ಯ.

ನೀವು ಹಲವಾರು ವಿಶ್ವವಿದ್ಯಾಲಯಗಳಿಗೆ ಅರ್ಜಿ ಹಾಕಿ, ಪ್ರಯತ್ನಗಳನ್ನು ಮಾಡಬೇಕು. ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ 10-15 ಅತ್ಯುನ್ನತ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಮಾಡಿ.

ಪ್ರವೇಶದ ಅರ್ಜಿಗಳು
ಪ್ರವೇಶ ಪ್ರಕ್ರಿಯೆ ಒಂದೇ ತರವಾಗಿದ್ದರೂ, ಅರ್ಜಿಗಳು ಬೇರೆ ರೀತಿ ಇರಬಹುದು. ನೀವು ಬಯಸುವ ವಿಶ್ವವಿದ್ಯಾಲಯಗಳ ಪಟ್ಟಿಯ ಪ್ರಕಾರ, ಅರ್ಜಿಗಳನ್ನು ಭರ್ತಿ ಮಾಡಿ ಕಳುಹಿಸಿ.

ನಿಮ್ಮ ಪರಿಚಯ ನೀಡುವ ಬಯೋಡೇಟ, ಮಾರ್ಕ್ಸ್‌ಕಾರ್ಡ್, ಲೇಖನ/ಪ್ರಬಂಧಗಳು, ಶಿಫಾರಸು ಪತ್ರ, ಹಣಕಾಸಿನ ಸಹಾಯ ಕೋರಿಕೆ, ಇತ್ಯಾದಿಗಳನ್ನು ಅರ್ಜಿಯ ಜೊತೆ ಕಳುಹಿಸಬೇಕಾಗುತ್ತದೆ.

ಪ್ರವೇಶದ ಪ್ರಕ್ರಿಯೆ
ನಿಮ್ಮ ಪದವಿ ಪೂರ್ವ/ಪದವಿ ಪರೀಕ್ಷೆಯ ಅಂಕಗಳು, ಪ್ರವೇಶ ಮತ್ತು ಇಂಗ್ಲಿಷ್ ಪರೀಕ್ಷೆಗಳ ಗ್ರೇಡ್ ಮತ್ತು ವಿಶ್ವವಿದ್ಯಾಲಯದ ನಿಬಂಧನೆಗಳನ್ನು ಪರಿಗಣಿಸಿ ಪ್ರವೇಶದ ನಿರ್ಣಯವಾಗುತ್ತದೆ. ಕೆಲವು ಪ್ರಖ್ಯಾತ ವಿಶ್ವವಿದ್ಯಾಲಯಗಳು ಅಂತಿಮ ನಿರ್ಣಯದ ಮುನ್ನ ಸಂದರ್ಶನವನ್ನು ಮಾಡುವುದು ಸಾಮಾನ್ಯ.

ವಿಶ್ವವಿದ್ಯಾಲಯಗಳ ಅಂಗೀಕಾರ
ಅರ್ಹತೆಯಾಧಾರದ ಮೇಲೆ, ನಿಮ್ಮ ಪ್ರವೇಶ ಅಂಗೀಕಾರವಾದಲ್ಲಿ, ವಿಶ್ವವಿದ್ಯಾಲಯಗಳು ಪ್ರವೇಶದ ಒಪ್ಪಿಗೆ ಪತ್ರವನ್ನು ರವಾನಿಸುತ್ತಾರೆ. ಆದರೆ, ಈ ಎಲ್ಲ ಪ್ರಕ್ರಿಯೆಗಳ ನಡುವೆ ನಿಮ್ಮ ವ್ಯಾಸಂಗದ ಮೇಲಿನ ಗಮನ ಕ್ಷೀಣಿಸದಿರಲಿ.

ಅಂತಿಮ ವಿಶ್ಲೇಷಣೆ
ಸಾಮಾನ್ಯವಾಗಿ 10-15 ವಿಶ್ವವಿದ್ಯಾಲಯಗಳಲ್ಲಿ ಅರ್ಜಿ ಹಾಕಿದರೆ, 3-4ರಲ್ಲಿ ಪ್ರವೇಶ ಸಿಗಬಹುದು. ಆದರೆ, ನೀವು ಬಯಸಿದ ವಿಶ್ವವಿದ್ಯಾಲಯದಲ್ಲಿ ಸಿಗದೆಯೂ ಇರಬಹುದು.

ನಿಮ್ಮ ಪ್ರವೇಶದ ಅರ್ಜಿ ಅಂಗೀಕಾರವಾದ ಎಲ್ಲಾ ವಿಶ್ವವಿದ್ಯಾಲಯಗಳ ಬಗ್ಗೆ- ಪ್ರಖ್ಯಾತಿ, ಸ್ಥಳದ ಮಹತ್ವ, ವಿದ್ಯಾರ್ಥಿ-ಅಧ್ಯಾಪಕ ಪ್ರಮಾಣ, ಸಂಪನ್ಮೂಲಗಳು, ಕಲಿಕೆಯ ವಿಧಾನಗಳು -ಮತ್ತೊಮ್ಮೆ ವಿಶ್ಲೇಷಣೆ ಮಾಡಿ.

ಹಾಗೂ, ಅಂತರ್ಜಾಲದ ಮುಖಾಂತರ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಹಿರಿಯ ಸಹಪಾಠಿಗಳನ್ನು ಸಂಪರ್ಕಿಸಿ. ಈ ಹಂತದಲ್ಲಿ ಸ್ವಲ್ಪ ಮಟ್ಟಿನ ಗೊಂದಲವಾದಲ್ಲಿ,ನಿಮ್ಮ ಕೌನ್ಸೆಲರ್ ಅಥವಾ ಮಾರ್ಗದರ್ಶಕರ ಜೊತೆ ಸಮಾಲೋಚಿಸಿ.

ವಿಶ್ವವಿದ್ಯಾಲಯಕ್ಕೆ ತಿಳಿಸಿ
ನಿಮ್ಮ ಅಂತಿಮ ನಿರ್ಧಾರವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಬೇಕು. ನಿಮಗೆ ಹಲವೆಡೆ ಪ್ರವೇಶ ಸಿಕ್ಕಿದ್ದರೆ, ಆ ವಿಶ್ವವಿದ್ಯಾಲಯಗಳಿಗೆ ನೀವು ಸೇರಿಕೊಳ್ಳಲಾಗದ ವಿಷಯವನ್ನು ತಿಳಿಸುವುದರಿಂದ, ಇತರ ವಿದ್ಯಾರ್ಥಿಗಳಿಗೆ ಪ್ರವೇಶ ಸುಗಮವಾಗುತ್ತದೆ.

ವೀಸಾ ದಾಖಲೆ ಪತ್ರ
ನಿಮ್ಮ ನಿರ್ಧಾರ ತಿಳಿದ ನಂತರ, ವಿಶ್ವವಿದ್ಯಾಲಯ ನಿಮಗೆ ವೀಸಾ ಪ್ರಕ್ರಿಯೆಗೆ ಬೇಕಾಗುವ ಪ್ರವೇಶ ಪತ್ರವನ್ನು ಉದಾಹರಣೆಗೆ, ಅಮೇರಿಕದಲ್ಲಿ ಐ-20 ರವಾನಿಸುತ್ತಾರೆ.

ವೀಸಾ ಪ್ರಕ್ರಿಯೆ
ನಿಮ್ಮ ವಿದೇಶಿ ಶಿಕ್ಷಣಕ್ಕೆ ವೀಸಾ ಸಿಕ್ಕೇ ಸಿಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಏಕೆಂದರೆ, ವೀಸಾ ಪ್ರಕ್ರಿಯೆಗೆ ಪ್ರವೇಶ ಪತ್ರ ಒಂದು ಮೂಲಭೂತ ದಾಖಲೆ ಮಾತ್ರ.

ಮುಂದುವರಿದ ರಾಷ್ಟ್ರಗಳಲ್ಲಿನ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದ್ದು, ವಿದೇಶಿ ಶಿಕ್ಷಣದ ಮುಖಾಂತರ ವಲಸೆ ಹೋಗುವುದು ಕಷ್ಟವಾಗಿದೆ.

ನಿಮ್ಮ ಕೋರ್ಸಿಗೆ ಬೇಕಾಗುವ ಹಣಕಾಸನ್ನು ಒದಗಿಸುವ ಸಾಮರ್ಥ್ಯ ಮತ್ತು ಭಾರತದಲ್ಲಿ ನಿಮಗಿರುವ ನಿಕಟ ಸಂಬಂಧಗಳನ್ನು ಇದರಿಂದ, ನೀವು ವಿದ್ಯಾಭ್ಯಾಸದ ನಂತರ ವಾಪಸ್ ಬರುತ್ತೀರ ಎಂದು ಅಂದಾಜು ಮಾಡುತ್ತಾ ವೀಸಾ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಆದ್ದರಿಂದ, ವೀಸಾ ಸಂದರ್ಶನಕ್ಕೆ ನೀವು ಸೂಕ್ತವಾಗಿ ತಯಾರಾಗಬೇಕು.


ವಸತಿ ಸೌಕರ್ಯ
ವೀಸಾ ಸಂದರ್ಶನದ ನಿರೀಕ್ಷೆಯಲ್ಲಿರುವಾಗ ಇತರ ಪ್ರಕ್ರಿಯೆಗಳ ಬಗ್ಗೆಯೂ ಗಮನ ಹರಿಸಿ. ಮುಖ್ಯವಾಗಿ, ವಿದೇಶದಲ್ಲಿ ಹಾಸ್ಟೆಲ್, ವಸತಿ ಸೌಕರ್ಯದ ಬಗ್ಗೆ ವಿಚಾರಿಸಿ.

ಈಗ, ವಿದ್ಯಾರ್ಥಿಗಳು ಒಟ್ಟುಗೂಡಿ ಬಾಡಿಗೆ ಮನೆಗಳಲ್ಲಿರುವುದು ರೂಢಿಯಾಗುತ್ತಿದೆ. ನಿಮ್ಮದೇ ಗುಂಪಿನಲ್ಲಿ ಒಟ್ಟಿಗೆ ಇರುವುದು ಅನೇಕ ದೃಷ್ಟಿಗಳಿಂದ ಅನುಕೂಲಕರ.ನಿಮ್ಮ ಆಸಕ್ತಿ, ನಡವಳಿಕೆಗಳಿಗೆ ಹೊಂದಾಣಿಕೆಯಾಗುವ ಸಹಪಾಠಿಗಳಿದ್ದರೆ ಸುಖಕರ.

ಇತರ ವಿಷಯಗಳು
ಉನ್ನತ ಶಿಕ್ಷಣದ ತಯಾರಿಯಲ್ಲಿರುವಾಗ, ನೀವು ವಿದೇಶದಲ್ಲಿನ ಸ್ಥಳೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ಅರಿಯುವುದು ಅವಶ್ಯಕ.

ಹಾಗೆಯೇ, ಮಾಮೂಲಿ ಸಂಭಾಷಣೆಯ ಮಟ್ಟಿಗಾದರೂ ಅಲ್ಲಿನ ಭಾಷೆಯನ್ನು ಕಲಿಯುವುದು ಉತ್ತಮ. ಇದು ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಅವಶ್ಯಕವೂ ಹೌದು.

ನೀವು ವಿದೇಶದಲ್ಲಿ ಉನ್ನತ ಶಿಕ್ಷಣ ಮಾಡುವುದೊಂದು ಸಾಧನೆಯೇ; ಅದು ಮುಂದಿನ ಯಶಸ್ವಿ ವೃತ್ತಿಜೀವನಕ್ಕೆ ನಿಮ್ಮನ್ನು ಸಜ್ಜು ಮಾಡುವ ಪ್ರಚೋದನೆಯೂ ಹೌದು.

ಆದರೆ, ವಿದೇಶಿ ವ್ಯಾಸಂಗ ಫಲಕಾರಿಯಾಗಬೇಕಾದರೆ, ಏಕಾಗ್ರತೆ ಮತ್ತು ಹೊಸ ವಾತಾವರಣದ ಸವಾಲುಗಳನ್ನು ಎದುರಿಸಲು ದೃಢವಾದ ಮನಸ್ಸಿರಬೇಕು.

ಈ ನಿಟ್ಟಿನಲ್ಲಿ ವಿದೇಶಿ ಪದವಿಯೊಂದೇ ನಿಮ್ಮ ಧ್ಯೇಯವಾಗಿರದಿರಲಿ; ಏಕೆಂದರೆ, ಪದವಿಗಳೇ ಯಶಸ್ಸಿನ ಮೂಲ ಕಾರಣವಾಗುವುದಿಲ್ಲ; ವಿದೇಶಿ ಪದವಿ ನಿಮ್ಮ ಜೀವನದ ಗುರಿಯನ್ನು ಸೇರುವುದಕ್ಕೊಂದು ಸಾಧನ.

ಉನ್ನತ ಶಿಕ್ಷಣವೆಂಬ ಜ್ಞಾನಾರ್ಜನೆ,ನೀವು ವೃತ್ತಿ ಜೀವನಕ್ಕೆ ಹೂಡಿದ ಬಂಡವಾಳ. ಈ ಬಂಡವಾಳವನ್ನು ಯಾವ ಉದ್ಯೋಗಕ್ಕೆ ಅಥವಾ ಸ್ವಂತ ಉದ್ದಿಮೆಗೆ, ಎಲ್ಲಿ ಮತ್ತು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆನ್ನುವುದು, ನಿಮ್ಮ ವೃತ್ತಿಜೀವನದ ರೂಪುರೇಷೆಯ ಪ್ರಮುಖ ಅಂಶವಾಗಿರಲಿ.

(ಲೇಖಕರು ಮ್ಯೋನೇಜ್‌ಮೆಂಟ್ ಮತ್ತು ವೃತ್ತಿ ಸಲಹಾಗಾರರು. ಇ ಮೇಲ್: info@promaxintl.com)

ವಿದೇಶಿ ಶಿಕ್ಷಣ: ಚೆಕ್‌ಲಿಸ್ಟ್

ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ನಿಮ್ಮಲ್ಲಿರಲಿ. ಹೆಚ್ಚಿನ ಹಣ ಟ್ರಾವೆಲ್ ಚೆಕ್ ರೂಪದಲ್ಲಿರಲಿ.

ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಿರಿ. ಕಾಯಂ ಲೈಸೆನ್ಸ್ ಸಿಗುವ ತನಕ ಇದರ ಉಪಯೋಗವಾಗಬಹುದು.

ಕಡ್ಡಾಯವಾದ ರೋಗ ನಿರೋಧಕ ಚುಚ್ಚುಮದ್ದನ್ನು ತೆಗೆದುಕೊಳ್ಳಿ. ಮಾಮೂಲಿ ಬೇನೆಗಳಿಗೆ ಕಾನೂನುಬದ್ಧ ಔಷಧಿಯನ್ನು ಕೊಂಡೊಯ್ಯಿರಿ.

ಅವಶ್ಯವಿರುವಷ್ಟು ದಿವಸಗಳಿಗೆ ಟ್ರಾವೆಲ್ ಮತ್ತು ಮೆಡಿಕಲ್ ಇನ್ಸ್ಯೂರೆನ್ಸ್ ಪಡೆಯಿರಿ.

ನಿಮ್ಮ ಗೈರುಹಾಜರಿಯಲ್ಲಿ ಬೇಕಾಗಬಹುದಾದ ಕಾನೂನು ಸಂಬಂಧಿತ ಪ್ರಮಾಣಪತ್ರ ಇತ್ಯಾದಿಗಳನ್ನು ಮಾಡಲು ಮರೆಯದಿರಿ.

ಅಂತರರಾಷ್ಟ್ರೀಯ ವಿದ್ಯಾರ್ಥಿ ಕಾರ್ಡ್ ಪಡೆಯುವುದರಿಂದ ಅನೇಕ ಡಿಸ್ಕೌಂಟ್, ಸೌಲಭ್ಯಗಳು ಸಿಗುತ್ತದೆ.

ಹಾಸ್ಟೆಲಿಂಗ್ ಇಂಟರ್‌ನ್ಯಾಷನಲ್ ಸದಸ್ಯತ್ವ ಪಡೆಯುವುದರಿಂದ ಪ್ರವಾಸ ಮಾಡುವಾಗ ಹಾಸ್ಟೆಲ್‌ಗಳಲ್ಲಿ ಇರಬಹುದು.

ಟ್ರಾವೆಲ್ ಅಡಾಪ್ಟರ್, ಸೂಕ್ತವಾದ ಮೊಬೈಲ್ ಫೋನ್ ಮತ್ತು ನೆನಪಿನ ಕಾಣಿಕೆಗಳನ್ನು ಕೊಂಡೊಯ್ಯುವುದು ಸೂಕ್ತ.

ಪಾಸ್‌ಪೋರ್ಟ್, ವೀಸಾ, ಪ್ರವೇಶದ ಪತ್ರ, ಇತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಲ್ಯಾಪ್‌ಟಾಪ್/ ಫ್ಲಾಶ್‌ಡ್ರೈವ್ ಮತ್ತು ಇಮೇಲ್‌ನಲ್ಲಿ ರಕ್ಷಿಸಿ.

ವಿದೇಶ ತಲುಪಿದ ನಂತರ ಭಾರತದ ರಾಯಭಾರಿ ಕಛೇರಿಯಲ್ಲಿ ಮತ್ತು ಭಾರತೀಯ ವಿದ್ಯಾರ್ಥಿ ಸಂಸ್ಥೆಯಲ್ಲಿ ನೋಂದಾಯಿಸಿ.

ಪ್ರಜಾವಾಣಿ, October 31, 2011

Sunday, November 13, 2011

ಭಾರತದ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿ ಭವ್ಯ ಸ್ವಾಗತ



ಆಕೆ ಮೌಲಶ್ರೀ ಮೋಹನ್. ದೆಹಲಿಯ ಪ್ರತಿಷ್ಠಿತ ಖಾಸಗಿ ಹೈಸ್ಕೂಲ್ ವಿದ್ಯಾರ್ಥಿನಿ. ತುಂಬ ಪ್ರತಿಭಾವಂತೆ, ಓದಿನಲ್ಲಿ ಮುಂದು. ಪಿಯುಸಿಯಲ್ಲಿ ಗಳಿಸಿದ್ದು ಶೇ 93.5 ಅಂಕ.
ಪದವಿ ತರಗತಿ ಸೇರಲು ಅರ್ಜಿ ಹಾಕಿದರೆ ದೆಹಲಿ ವಿಶ್ವವಿದ್ಯಾಲಯದ ಅನೇಕ ಹೆಸರುವಾಸಿ ಕಾಲೇಜುಗಳಲ್ಲಿ ಸೀಟು ಸಿಗಲೇ ಇಲ್ಲ. ಅಲ್ಲಿನ ಒಂದು ಅತ್ಯುತ್ತಮ ಕಾಲೇಜಲ್ಲೇ ಮಗಳನ್ನು ಸೇರಿಸುವ ತಂದೆ ತಾಯಿಗಳ ಹಂಬಲ ಈಡೇರಲಿಲ್ಲ. ಏಕೆಂದರೆ ಈ ಕಾಲೇಜುಗಳ ಕಟ್‌ಆಫ್ ಅಂಕ ಇನ್ನೂ ಹೆಚ್ಚು.

ಆದರೆ ಅಮೆರಿಕದ ಕಾಲೇಜುಗಳಿಗೆ ಅರ್ಜಿ ಕಳಿಸಿದಾಗ ಸಿಕ್ಕದ್ದು ಅದ್ಭುತ ಪ್ರತಿಕ್ರಿಯೆ. ಡಾರ್ಟ್‌ಮೌತ್ ವಿವಿ 20 ಸಾವಿರ ಡಾಲರ್ ಮತ್ತು ಸ್ಮಿತ್ ವಿವಿ 15 ಸಾವಿರ ಡಾಲರ್ ಪ್ರತಿಭಾವೇತನ ನೀಡಲು ಮುಂದೆ ಬಂದವು. ಆಕೆ ತಮ್ಮ ಕಾಲೇಜಿಗೆ ಬಂದು ಸೇರಬಹುದು ಎಂದು ಕಾರ್ನೆಲ್, ಬ್ರೈನ್‌ಮೌರ್, ಡ್ಯೂಕ್, ವೆಸ್ಲಿಯನ್, ಬರ್ನಾರ್ಡ್, ಯುನಿವರ್ಸಿಟಿ ಆಫ್ ವರ್ಜೀನಿಯಾ ಹೀಗೆ ಅಮೆರಿಕದ ಬಹು ಬೇಡಿಕೆಯ ಶಿಕ್ಷಣ ಸಂಸ್ಥೆಗಳು ಆಹ್ವಾನಿಸಿದವು.
18 ವರ್ಷದ ಒಬ್ಬ ಬುದ್ಧಿವಂತ ಮಹತ್ವಾಕಾಂಕ್ಷಿ ವಿದ್ಯಾರ್ಥಿನಿಗೆ ಇದರಿಂದ ಪುಳಕವಾಗದೇ ಇರುತ್ತದೆಯೇ?

`ನನ್ನ ಮಗಳೀಗ ಡಾರ್ಟ್‌ಮೌತ್ ವಿವಿ ಸೇರಿದ್ದಾಳೆ. ದೆಹಲಿ ಕಾಲೇಜುಗಳು ಸೀಟು ನಿರಾಕರಿಸಿದವರಿಗೆ ಅಮೆರಿಕದ ಕಾಲೇಜುಗಳು ಕೈಬೀಸಿ ಕರೆಯುವುದೆಂದರೆ ನಿಜಕ್ಕೂ ಹೆಮ್ಮೆ, ಅಷ್ಟೇ ಸೋಜಿಗ` ಎಂದು ಫೇಸ್‌ಬುಕ್‌ನಲ್ಲಿ ಬರೆಯುತ್ತಾರೆ ಮೌಲಶ್ರೀಯ ತಾಯಿ ಮಾಧವಿ ಚಂದ್ರ.

ಭಾರತದಲ್ಲಿ ಅತ್ಯಂತ ಪ್ರತಿಭಾವಂತ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಕೂಡ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗಬೇಕೆಂದರೆ ಭಾರೀ ಪೈಪೋಟಿ ಮಾಡಬೇಕಾಗುತ್ತದೆ. ಬಹುಬೇಡಿಕೆಯ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ವಿಪರೀತ ಬೇಡಿಕೆಯಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಕ್ಕೆ ಹೇಗಾದರೂ ಹಣ ಹೊಂದಿಸಲು ಸಿದ್ಧವಿರುವ ಮಧ್ಯಮ ವರ್ಗದ ಸಂಖ್ಯೆ ಬೆಳೆಯುತ್ತಿದೆ. 120 ಕೋಟಿ ಜನಸಂಖ್ಯೆಯಲ್ಲಿ 25 ವರ್ಷದೊಳಗಿನವರ ಸಂಖ್ಯೆ ಅರ್ಧದಷ್ಟಿದೆ.

ದೆಹಲಿ ವಿಶ್ವ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ತನ್ನ ಕೆಲ ಹೆಸರಾಂತ ಕಾಲೇಜುಗಳಲ್ಲಿ ಪ್ರವೇಶ ಅರ್ಹತಾ ಅಂಕಗಳನ್ನು ತುಂಬ ಹೆಚ್ಚಿಸಿತ್ತು. ಅನೇಕ ವಿಷಯಗಳಲ್ಲಂತೂ ಇದು ಶೇ100ರ ಹತ್ತಿರ.

ಇನ್ನು, ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಜತೆಜತೆಗೇ ಎರಡು ವರ್ಷ ವಿಶೇಷ ಪಾಠ (ಕೋಚಿಂಗ್) ಹೇಳಿಸಿಕೊಂಡು ಸಿಕ್ಕಾಪಟ್ಟೆ ಓದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಲು ಅರ್ಜಿ ಹಾಕಿದವರಲ್ಲಿ ಕೊನೆಗೆ ಸೀಟು ಸಿಗುವುದು ಶೇ 1ಕ್ಕಿಂತಲೂ ಕಮ್ಮಿ ವಿದ್ಯಾರ್ಥಿಗಳಿಗೆ. ಏಕೆಂದರೆ ಪ್ರವೇಶ ಪರೀಕ್ಷೆಗೆ ಅರ್ಹರಾಗುವ ಸುಮಾರು 5 ಲಕ್ಷ ವಿದ್ಯಾರ್ಥಿಗಳಲ್ಲಿ ಎಷ್ಟು ಮಕ್ಕಳನ್ನು ಅವು ಸೇರಿಸಿಕೊಳ್ಳಲು ಸಾಧ್ಯ ಹೇಳಿ?

`ಸಮಸ್ಯೆ ಏನು ಎಂಬು ಸ್ಫಟಿಕದಷ್ಟೇ ನಿಚ್ಚಳ. ಇದು ಬೇಡಿಕೆ ಮತ್ತು ಪೂರೈಕೆ ಅಂತರದ ವಿಷಯ` ಎನ್ನುತ್ತಾರೆ ಸ್ವತಃ ಹಾರ್ವರ್ಡ್‌ನಲ್ಲಿ ಕಾನೂನು ವ್ಯಾಸಂಗ ಪೂರೈಸಿದ ಭಾರತದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್. `ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸೀಮಿತ. ಆದರೆ ಅವನ್ನೇ ಸೇರಲು ಹಾತೊರೆಯುವ ಅರ್ಹ ವಿದ್ಯಾರ್ಥಿಗಳ ಸಂಖ್ಯೆ ಅಪರಿಮಿತ. ಇಲ್ಲಿದೆ ಸಮಸ್ಯೆಯ ಮೂಲ` ಎಂದು ಅವರು ವ್ಯಾಖ್ಯಾನಿಸುತ್ತಾರೆ.

ಇಂಥ ಪ್ರತಿಭಾವಂತರ ಪಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಲು ಉತ್ಸುಕವಾಗಿವೆ ಅಮೆರಿಕದ ವಿವಿಗಳು. ದತ್ತಿ ದೇಣಿಗೆಗಳ ಪ್ರಮಾಣದಲ್ಲಿ ಇಳಿಮುಖ, ಅಮೆರಿಕನ್ ಕುಟುಂಬಗಳನ್ನು ಬಾಧಿಸುತ್ತಿರುವ ಆರ್ಥಿಕ ಸಂಕಷ್ಟ, ಹೈಸ್ಕೂಲ್ ಮುಗಿಸಿ ಹೊರಬರುವ ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಅವುಗಳನ್ನು ಭಾರತದತ್ತ ನೋಡುವಂತೆ ಮಾಡುತ್ತಿದೆ. ಅದಕ್ಕಾಗಿಯೇ ಸಹಸ್ರಾರು ಮೈಲು ದೂರದ ಭಾರತೀಯ ವಿದ್ಯಾರ್ಥಿಗಳಿಗೆ ಗಾಳ ಹಾಕುತ್ತಿವೆ.

ಐವಿ ಲೀಗ್‌ನ ಅನೇಕ ಶಿಕ್ಷಣ ಸಂಸ್ಥೆಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಲ್ಲಿ ಕಾಯಂ ಕಚೇರಿ ತೆರೆಯುತ್ತಿವೆ, ಭಾರತೀಯ ಶಿಕ್ಷಣ ಸಂಸ್ಥೆಗಳ ಜತೆ ಒಪ್ಪಂದಕ್ಕೆ ಮುಂದಾಗುತ್ತಿವೆ. ಸಲಹೆಗಾರರು, ಕೌನ್ಸೆಲರ್‌ಗಳ ತಂಡಗಳನ್ನು ಭಾರತಕ್ಕೆ ಕಳಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಮಾಡುತ್ತಿವೆ. ಅಮೆರಿಕದ ವಿದೇಶಾಂಗ ಖಾತೆ ಕೂಡ ಇದಕ್ಕೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದು ಇತ್ತೀಚೆಗೆ ಜಾರ್ಜ್‌ಟೌನ್ ವಿವಿಯಲ್ಲಿ ಭಾರತ- ಅಮೆರಿಕ ಉನ್ನತ ಶಿಕ್ಷಣ ಸಮಾವೇಶ ಆಯೋಜಿಸಿತ್ತು.

ಚೀನಿಯರನ್ನು ಬಿಟ್ಟರೆ ಅಮೆರಿಕದಲ್ಲಿ ಭಾರತೀಯರದ್ದೇ ಎರಡನೇ ಅತಿ ದೊಡ್ಡ ವಿದ್ಯಾರ್ಥಿ ಸಮೂಹ. ಇಲ್ಲಿ 2009-10ನೇ ಶೈಕ್ಷಣಿಕ ವರ್ಷದಲ್ಲಿ ಸುಮಾರು 1.05 ಲಕ್ಷ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಕಳೆದ ವರ್ಷ ವಿದ್ಯಾರ್ಥಿ ವೀಸಾಗೆ ಅರ್ಜಿ ಹಾಕಿದ ಭಾರತೀಯರ ಸಂಖ್ಯೆಯಲ್ಲಿ ಶೇ 20ರಷ್ಟು ಏರಿಕೆಯಾಗಿತ್ತು.

ಭಾರತದಿಂದ ಬರುವವರಲ್ಲಿ ಅಲ್ಲಿ `ಪದವಿ ಮುಗಿಸಿ` ಇಲ್ಲಿ ಉನ್ನತ ಶಿಕ್ಷಣಕ್ಕೆ ಸೇರಿಕೊಳ್ಳುವವರ ಸಂಖ್ಯೆಯೇ ಅಧಿಕ. ಆದರೆ ಕಳೆದ ಕೆಲ ವರ್ಷದಲ್ಲಿ `ಪದವಿ ತರಗತಿಗೆ` ಪ್ರವೇಶ ಪಡೆಯಲು ಬರುವವರ ಪ್ರಮಾಣದಲ್ಲೂ ಶೇ 20ರಷ್ಟು ಹೆಚ್ಚಳವಾಗಿದೆ. ಬಹಳ ಹಿಂದಿನಿಂದಲೂ ಸಿರಿವಂತ ಭಾರತೀಯರು ತಮ್ಮ ಮಕ್ಕಳನ್ನು ಅಮೆರಿಕದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ಕಳಿಸುತ್ತಿದ್ದರು. ಈಗ ಈ ಪ್ರವೃತ್ತಿ ಮಧ್ಯಮ ವರ್ಗಕ್ಕೂ ವಿಸ್ತರಣೆಯಾಗಿದೆ.

ಪಿಯು ಶಿಕ್ಷಣ ವಿದ್ಯಾರ್ಥಿಯ ಭವಿಷ್ಯ ನಿರ್ಧರಿಸುತ್ತದೆ. ಹೀಗಾಗಿ ಅದರಲ್ಲಿ ಹೆಚ್ಚು ಹೆಚ್ಚು ಅಂಕ ಗಳಿಸಲೇಬೇಕು ಎನ್ನುವ ಅತಿಯಾದ ಒತ್ತಡದಿಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಮುಕ್ತಗೊಳಿಸಿವೆ ಅಮೆರಿಕದ ವಿವಿಗಳು. ಏಕೆಂದರೆ ಒಳ್ಳೆ ಅಂಕ ಗಳಿಸಿಯೂ ಭಾರತದಲ್ಲಿ ಉತ್ತಮ ಶಾಲೆಯಲ್ಲಿ ಸೀಟು ಪಡೆಯಲಾಗದ ಮಕ್ಕಳಿಗೆ ಅವು ಕೆಂಪುಹಾಸಿನ ಸ್ವಾಗತ ನೀಡುತ್ತಿವೆ. ಭಾರತದಲ್ಲಂತೂ ಪರೀಕ್ಷೆ ಎಂದರೆ ಯಾತನೆ, ಭಯಾನಕ ಅನುಭವ, ಮಿತಿಮೀರಿದ ಒತ್ತಡ ಇದ್ದಂತೆ. `ಟೈಫಾಯಿಡ್‌ನಿಂದ ನರಳುತ್ತಿದ್ದರೂ ವಿಧಿಯಿಲ್ಲದೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ, ಪ್ರಶ್ನೆಪತ್ರಿಕೆ ನೋಡುತ್ತಿದ್ದಂತೆ ಮೂರ್ಛೆ ಹೋದದ್ದನ್ನು ನಾನು ಕಂಡಿದ್ದೇನೆ` ಎಂದು ನೆನಪಿಸಿಕೊಳ್ಳುತ್ತಾಳೆ ನಿಖಿತಾ ಸಚದೇವ್.

19 ವರ್ಷದ ಈಕೆ ಶೇ 94.5 ಅಂಕ ಪಡೆದು 2010ರಲ್ಲಿ ದೆಹಲಿ ಪಬ್ಲಿಕ್ ಶಾಲೆಯಿಂದ ತೇರ್ಗಡೆಯಾಗಿದ್ದಳು. ಆದರೆ ಕೇವಲ ಶೇ 0.1 ಅಂಕ ಕಡಿಮೆ ಇದ್ದ ಕಾರಣ ತಾನು ಇಷ್ಟಪಟ್ಟ ಸೆಂಟ್ ಸ್ಟೀಫನ್ಸ್ ಕಾಲೇಜಿಗೆ ಪ್ರವೇಶ ಪಡೆಯಲು ಆಗಲಿಲ್ಲ. ಆದರೆ ಆಕೆ ಎದೆಗುಂದಿಲ್ಲ. ಓದನ್ನು ಒಂದು ವರ್ಷ ಮುಂದೆ ಹಾಕಿ ದೆಹಲಿಯಲ್ಲೇ ವಿಶ್ವ ಆರೋಗ್ಯ ಸಂಘಟನೆ ಕಚೇರಿಯಲ್ಲಿ ಸಹಾಯಕಿಯಾಗಿ ತಾತ್ಕಾಲಿಕ ಕೆಲಸಕ್ಕೆ ಸೇರಿದ್ದಾಳೆ, ಜತೆಗೆ ಅಮೆರಿಕದ ವಿವಿಧ ವಿವಿಗಳಿಗೆ ಅರ್ಜಿ ಹಾಕುತ್ತಿದ್ದಾಳೆ.

ಅನೇಕ ವಿದ್ಯಾರ್ಥಿಗಳು ಇಲ್ಲಿ ಸೀಟು ಸಿಗಲಿಲ್ಲ ಎಂಬ ಏಕಮಾತ್ರ ಕಾರಣಕ್ಕಾಗಿ ಅಮೆರಿಕದ ವಿವಿಗಳಿಗೆ ಅರ್ಜಿ ಹಾಕುತ್ತಿಲ್ಲ. ಶೈಕ್ಷಣಿಕ ಮತ್ತು ವಿಷಯ ಆಯ್ಕೆ ಸ್ವಾತಂತ್ರ್ಯ ಕೂಡ ಅವರ ನಿರ್ಧಾರದ ಹಿಂದೆ ಕೆಲಸ ಮಾಡುತ್ತಿದೆ. ಏಕೆಂದರೆ ಭಾರತೀಯ ಶಿಕ್ಷಣ ಪದ್ಧತಿ ಅತ್ಯಂತ ಗಡಸು, ಕಠಿಣ. ಪಿಯುಸಿಯಲ್ಲಿ ತೆಗೆದುಕೊಂಡ ವಿಷಯದ ಹೊರತಾಗಿ ಬೇರೆ ವಿಷಯದ ಓದಿಗೆ ಅವಕಾಶ ಕಡಿಮೆ. ಜತೆಗೆ ವೈದ್ಯಕೀಯ, ಎಂಜಿಯರಿಂಗ್, ವಾಣಿಜ್ಯ, ಅರ್ಥಶಾಸ್ತ್ರ ಇತ್ಯಾದಿ ಬಿಟ್ಟರೆ ಇತರ ವಿಷಯಗಳಿಗೆ ಭವಿಷ್ಯ ಇಲ್ಲ ಎಂಬ ಭಾವನೆ ಆಳವಾಗಿದೆ. ಹೀಗಾಗಿ ವಿದ್ಯಾರ್ಥಿಗೆ ಇಷ್ಟ ಇಲ್ಲದೇ ಹೋದರೂ ಇವೇ 3-4 ವಿಷಯವನ್ನೇ ಆರಿಸಿಕೊಳ್ಳಲು ಒತ್ತಡ ಹೇರಲಾಗುತ್ತದೆ. ಭಾಷೆ, ಇತಿಹಾಸ, ಕಲೆಗಳನ್ನು ಬೇಡಿಕೆ ಇಲ್ಲದ ವಿಷಯ ಎಂದೇ ಪರಿಗಣಿಸಲಾಗುತ್ತದೆ.

`ನಮ್ಮಲ್ಲಿ ಹುಡುಗಿಯರ ಪಾಲಿಗೆ ಯಾವುದಾದರೂ ಒಂದು ಪದವಿ ಎಂಬುದು ಮದುವೆಗೆ ಮೆಟ್ಟಿಲು. ಆದರೆ ನನಗದು ಇಷ್ಟವಿಲ್ಲ. ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವಾಗಿ, ಸೃಜನಶೀಲ ಬರವಣಿಗೆಯನ್ನು ಎರಡನೇ ವಿಷಯವಾಗಿ ತೆಗೆದುಕೊಂಡು ಓದಬೇಕೆಂಬ ಆಸೆ` ಎನ್ನುವ ನಿಖಿತಾಗೆ ಷಿಕಾಗೊ ವಿವಿಯಿಂದ ಕರೆ ಬಂದಿದೆ.

ಐಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಬೇಕು ಎಂಬುದು ಸಿದ್ಧಾಂತ ಪುರಿಗೆ ಬಾಲ್ಯದಿಂದಲೂ ಇದ್ದ ಆಸೆ. ಆದರೆ ಪಿಯುಸಿಯಲ್ಲಿ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾಗ ಎಂಜಿನಿಯ ರಿಂಗ್ ತನಗೆ ಸರಿ ಹೋಗುವುದಿಲ್ಲ ಎಂದು ಅನಿಸಿತು. ಈಗಾತ ಶಾಲೆಯ ಉತ್ತಮ ಸಾಕರ್ ಆಟಗಾರ. ಬರ್ಕಲೆಯ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಜರ್ಮನ್ ಭಾಷೆ ಮತ್ತು ಕಂಪ್ಯೂಟರ್ ವಿಜ್ಞಾನ ವಿಷಯ ತೆಗೆದುಕೊಳ್ಳುವ ಸಿದ್ಧತೆಯಲ್ಲಿದ್ದಾನೆ.

ಅಮೆರಿಕನ್ ವಿವಿಗಳು ಕಣ್ಣಿಟ್ಟಿರುವುದು ಇಂಥ ವಿದ್ಯಾರ್ಥಿಗಳ ಮೇಲೆ. `ನಮ್ಮ ವಿವಿಗೆ ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರೆಲ್ಲ ಪ್ರತಿಭಾವಂತರು` ಎನ್ನುತ್ತಾರೆ ಬ್ರೌನ್ ವಿವಿಯ ಅಂತರ ರಾಷ್ಟ್ರೀಯ ವ್ಯವಹಾರಗಳ ಉಪಾಧ್ಯಕ್ಷ ಮ್ಯಾಥ್ಯೂ ಗುಟ್‌ಮನ್. ಅವರ ವಿವಿ ದೆಹಲಿಯಲ್ಲಿ ಇದಕ್ಕಾಗಿಯೇ ಕಚೇರಿ ತೆರೆಯಲು ಉದ್ದೇಶಿಸಿದೆ. 2008ರಲ್ಲಿ 86 ಭಾರತೀಯ ವಿದ್ಯಾರ್ಥಿಗಳಿಗೆ ಅದು ಪದವಿ ಹಂತದಲ್ಲಿ ಪ್ರವೇಶ ನೀಡಿತ್ತು. ಈ ಸಲ 300ಕ್ಕೆ ಏರಿದೆ.

ಭಾರತ ದೊಡ್ಡ ದೇಶ; ಅಲ್ಲಿನ ಮಧ್ಯಮ ವರ್ಗವೂ ಅಷ್ಟೇ ದೊಡ್ಡದಿದೆ. ಅವರಿಗೆ ಶಿಕ್ಷಣವೇ ಸರ್ವಸ್ವ. ಪಾಲಕರು ತಮ್ಮ ಕೈಬಾಯಿ ಕಟ್ಟಿ, ತಮ್ಮೆಲ್ಲ ಸುಖ ತ್ಯಾಗಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಡುತ್ತಾರೆ, ಅದೇ ಅವರ ಪಾಲಿನ ಬಂಡವಾಳ. ಆದರೆ ನಮ್ಮ ಶಿಕ್ಷಣ ವೆಚ್ಚ ದುಬಾರಿ` ಎನ್ನುತ್ತಾರೆ ನ್ಯೂಯಾರ್ಕ್‌ನ ಲಾಭರಹಿತ ಸ್ವಯಂಸೇವಾ ಸಂಸ್ಥೆ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಎಡುಕೇಷನ್ ಅಧ್ಯಕ್ಷ ಅಲನ್ ಗುಡ್‌ಮನ್.

ಭಾರತದಲ್ಲಿ ಖರ್ಚು ವೆಚ್ಚಗಳ ಹೊರೆ ಜಾಸ್ತಿ. ಅನೇಕ ಮಧ್ಯಮ ವರ್ಗದವರ ವೇತನ ಪಾಶ್ಚಾತ್ಯ ದೇಶಗಳ ಬಡವರ ಆದಾಯಕ್ಕಿಂತಲೂ ಕಮ್ಮಿ. ಅಮೆರಿಕ ಮತ್ತು ಭಾರತದ ಪ್ರತಿಷ್ಠಿತ ವಿವಿಗಳ ಶಿಕ್ಷಣ ಶುಲ್ಕವಂತೂ ಅಜಗಜಾಂತರ. ಉದಾಹರಣೆಗೆ ಡಾರ್ಟ್‌ಮೌತ್‌ನಲ್ಲಿ ಊಟ, ವಸತಿ ಬಿಟ್ಟು ವಾರ್ಷಿಕ ಶಿಕ್ಷಣ ಶುಲ್ಕ 41736 ಡಾಲರ್ (ಸುಮಾರು 21 ಲಕ್ಷ ರೂ), ಆದರೆ ದೆಹಲಿಯ ಬಹುತೇಕ ಕಾಲೇಜುಗಳಲ್ಲಿ ಟ್ಯೂಷನ್ ಫೀ 7 ಸಾವಿರದಿಂದ 25 ಸಾವಿರ ರೂ.

ಅನೇಕ ತಂದೆ ತಾಯಿಗಳಿಗಂತೂ ಹದಿವಯಸ್ಸಿನ ಮಗಳು- ಮಗನನ್ನು ಸಮುದ್ರದಾಚೆ ಸಾವಿರಾರು ಮೈಲು ದೂರ ಕಳಿಸುವುದು ಮನಸ್ಸಿಗೆ ನೋವು ಕೊಡುತ್ತದೆ. ಮಗಳು ಅಮೆರಿಕಕ್ಕೆ ಹೊರಡುವ ಮುನ್ನ ಚಂದ್ರಾ ಆತಂಕದಿಂದ ನಿದ್ರೆಯಿಲ್ಲದೆ ಅನೇಕ ರಾತ್ರಿ ಕಳೆದಿದ್ದರು. ಆದರೆ ಮನಶಾಸ್ತ್ರದ ಜತೆಗೆ ಸಾಕ್ಷ್ಯ ಚಿತ್ರ ತಯಾರಿಕೆಯಲ್ಲಿ ಆಸಕ್ತಿ ಇರುವ ತನ್ನ ಮಗಳಿಗೆ ಭಾರತದಲ್ಲಿ ಸರಿಯಾದ ಕಾಲೇಜು ಇಲ್ಲ ಎಂದು ಅವರಿಗೆ ಮನವರಿಕೆಯಾಗಿದೆ.

`ನನ್ನ ಮಗಳು ಪ್ರತಿಭೆ, ಆಸಕ್ತಿಗೆ ತಕ್ಕ ಮಾನ್ಯತೆ ಇರುವಲ್ಲಿ ಈಗ ಓದುತ್ತಿರುವುದರಿಂದ ನನಗಂತೂ ಖುಷಿಯಾಗಿದೆ` ಎಂಬ ಅವರ ಮಾತು ಮಹತ್ವಾಕಾಂಕ್ಷಿ ಭಾರತೀಯ ಮಧ್ಯಮ ವರ್ಗವನ್ನು ಧ್ವನಿಸುವಂತಿದೆ. ಅಲ್ಲವೇ?

Friday, November 4, 2011

Motivational Thoughts

1) If you believe everything you read, better not read.
- Japanese Proverb

2) A book is like a garden carried in the pocket.
- Chinese Proverb

3) Books can be dangerous. The best ones should be labeled ‘This could change your life’.
- Helen Exley

4) Wear your learning, like your watch, in a private pocket: and do not pull it out and
strike it, merely to show that you have one.
- Philip Stanhope, 4th Earl of Chesterfield

5) The wisest men follow their own direction.
- Euripides

6) He who asks is a fool for five minutes, but he who does not ask remains a fool forever.
- Chinese Proverb

7) Concentrate all your thoughts upon the work at hand. The sun’s rays do not burn until
brought to a focus.
- Alexander Graham Bell

8) Study while others are sleeping; work while others are loafing; prepare while others are
playing; and dream while others are wishing.
- William Arthur Ward

9) Wise people learn when they can; fools learn when they must.
- Arthur Wellesley, Duke of Wellington

10) Learn from yesterday, live for today, hope for tomorrow. The important thing is to not
stop questioning.
- Albert Einstein

11) It’s not that I’m so smart, it’s just that I stay with problems longer.
- Albert Einstein

12) I learned that if you want to make it bad enough, no matter how bad it is, you can make
it.
- Gale Sayers

13) Where there’s a will there’s a way.
- English Proverb

14) Determination gives you the resolve to keep going in spite of the roadblocks that lay
before you.
- Denis Waitley

15) The surest way not to fail is to determine to succeed.
- Richard B. Sheridan

16) A determined person will do more with a pen and paper, than a lazy person will accomplish
with a personal computer.
- Catherine Pulsifer

17) The difference between the impossible and the possible lies in a person’s determination.
- Tommy Lasorda

18) If you doubt you can accomplish something, then you can’t accomplish it. You have to have
confidence in your ability, and then be tough enough to follow through.
- Rosalyn Carter

19) What this power is I cannot say; all I know is that it exists and it becomes available
only when a man is in that state of mind in which he knows exactly what he wants and is
fully determined not to quit until he finds it.
- Alexander Graham Bell

20) There is no chance, no destiny, no fate, that can hinder or control the firm resolve of a
determined soul.
- Ella Wheeler Wilcox

21) Don’t let go of your dreams. If you have determination and belief in your dreams, you
will succeed in spite of your desire to let go.
- Catherine Pulsifer